Posts

Showing posts from February, 2018

ಡಿಜಿಟಲ್ ಹೆಜ್ಜೆ ಗುರುತುಗಳು

Image
ನಮ್ಮ ಕೆಲಸದ ಸ್ಥಳದಲ್ಲಿ ಅಥವಾ ನಾವು ವಾಸಿಸುವಲ್ಲಿ  ಇತರರ ವ್ಯವಹಾರದಲ್ಲಿ ಆಸಕ್ತಿ ಇರದಿದ್ದರೂ  ಅವರ ನಡೆವಳಿಕೆಯನ್ನು ಮತ್ತು ವ್ಯವಹಾರವನ್ನು  ತಿಳಿಯದೆ ಇರುವುದು ಈ ಮಿನ್ನರಿವಿನ ಯುಗದಲ್ಲಿ ಅಸಾಧ್ಯವಾಗಿರುತ್ತದೆ. ನಮ್ಮ  ಮಕ್ಕಳಿಗೆ  ನಾವು  ನಂಬಿಕೆ ಮತ್ತು ಭದ್ರತೆಯ ಪರಿಸರವನ್ನು  ನಿರ್ಮಿಸುತ್ತೇವೆ.  ಈ ಭದ್ರತೆಯೇ  ಅವರನ್ನು   ಸಾಮಾಜಿಕ ಮಾಧ್ಯಮ, ಅಥವಾ ಅಂತರ್ಜಾಲದಲ್ಲಿ ಇರುವ  ಅಪಾಯಗಳ ಅರಿವಿಲ್ಲದಂತೆ ಮಾಡುತ್ತದೆ. ನಮ್ಮ ಮಕ್ಕಳು ಸಾಮಾಜಿಕ ಮಾಧ್ಯಮದ ಅಥವಾ ಅಂತರ್ಜಾಲದ ಮಾಹಿತಿಯುಕ್ತ ಮತ್ತು ಜವಾಬ್ದಾರಿಯುತವಾದ ಬಳಕೆಯನ್ನು ಮಾಡುವಂತೆ ತಿಳಿಹೇಳುವುದು  ಪೋಷಕರಾಗಿ  ನಮ್ಮ ಕರ್ತವ್ಯವಾಗಿರುತ್ತದೆ.  ನೇರ ಸಲಹೆಗಳನ್ನು ಸಾಮಾನ್ಯವಾಗಿ ನಾವು ಧನಾತ್ಮಕವಾಗಿ  ಅದು ತರ್ಕಬದ್ಧವಾಗಿದ್ದರೂ ವಿಚಿತ್ರ ಕಾರಣಗಳಿಂದಾಗಿ ಸ್ವೀಕರಿಸುವುದಿಲ್ಲ.  ಹೆಚ್ಚು ವಿದ್ಯಾವಂತರಾಗಿದಷ್ಟು, ನಾವು ಮತ್ತು ನಮ್ಮ ಮಕ್ಕಳು ಸಾಮಾನ್ಯವಾಗಿ ಅಂತರ್ಜಾಲದ ಜವಾಬ್ದಾರಿಯುತ ಬಳಕೆಯ ಬಗ್ಗೆ ನಮಗೆ ಸಲಹೆ ನೀಡಲು ಯಾರೂ ನಿಜವಾಗಿಯೂ ಅರ್ಹರಾಗಿಲ್ಲ ಎಂದು  ಭಾವಿಸುತ್ತೇವೆ. ಇನ್ನೊಬ್ಬರ ಮಾತುಗಳು ತರ್ಕಬದ್ಧವಾಗಿದ್ದರೂ ನಾವು ನಮ್ಮ ಭಾವನೆಗಳನ್ನು ಕಲಕಿಸಿ ನಿಜವಾದ ಉದ್ದೇಶಗಳಿದ್ದ ಸಲಹೆಗಳನ್ನು ಸ್ವೀಕರಿಸಲು  ಅಸಮರ್ಥರಾಗುತ್ತೇವೆ. ಸಾಮಾಜಿಕ ಮಾಧ್ಯಮದ ಜವಾಬ್ದಾರಿ...